ಇಂದು- ನಾಳೆ ಮೈಸೂರಿನ ಮೊದಲ ‘ಜವಾರಿ ಕಾಳು ಮೇಳ’
Apr 05 2025, 12:49 AM ISTಎರಡು ದಿನಗಳ ಕಾಳು ಮೇಳದಲ್ಲಿ 100 ಹೆಚ್ಚಿನ ಕಾಳಿನ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಅಪರೂಪದ ರೆಕ್ಕೆ ಅವರೆ, ಅಕ್ಕಿ ಅವರೆ, ಚಪ್ಪರದವರೆ, ಚುಕ್ಕಿ ಶೇಂಗಾ, ತಮ್ಮೇ ಬೀಜ, ಕಪ್ಪು ಮತ್ತು ಹಸಿರು ಕಡಲೆ, ಕಪ್ಪು ಹುರುಳಿ ಮೊದಲಾದ ಕಾಳುಗಳು ಪ್ರದರ್ಶನಕ್ಕೆ ಬರಲಿವೆ. ಜಿಐ ಟ್ಯಾಗ್ ಪಡೆದ ಗುಲ್ಬರ್ಗಾ ತೊಗರಿ ಮತ್ತು ಉತ್ತರ ಕರ್ನಾಟಕದ ಜವಾರಿ ತೊಗರಿ ಪ್ರದರ್ಶನ ಹಾಗೂ ಮಾರಾಟಕ್ಕೆ ಬರುತ್ತಿವೆ.