ಪುತ್ತೂರಿನಲ್ಲಿ ಏ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ ಎನ್ನುತ್ತಿದ್ದಾರೆ. ಸೋಲಿನ ಹತಾಶೆ ಕಾಂಗ್ರೆಸನ್ನು ಕಾಡುತ್ತಿದೆ ಎಂದು ಮಠಂದೂರು ಹೇಳಿದರು.
. ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ನುಡಿದಂತೆ ನಡೆದಿದ್ದೇವೆ ಮತ ಕೊಡಿ ಎಂದರೆ, ಬಿಜೆಪಿಯು ದೇಶದ ರಕ್ಷಣೆಗೆ, ಅಭಿವೃದ್ಧಿಗೆ ಮೋದಿಯೇ ಗ್ಯಾರಂಟಿ, ಅವರನ್ನು ಮತ್ತೆ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದೆ.