ಮೋದಿ ಸುಳ್ಳಿನಿಂದಲೇ ಬಿಜೆಪಿಗರು ಸೋಲ್ತಾರೆ: ಮಧು
Mar 21 2024, 01:04 AM ISTಪ್ರಧಾನಿ ನರೇಂದ್ರ ಮೋದಿ ಹೇಳುವ ಸುಳ್ಳು ಜನರಿಗೆ ತಿಳಿಯುತ್ತಿದೆ. ಈ ಬಾರಿ ಮೋದಿ ಹೇಳುವ ಸುಳ್ಳಿನಿಂದಲೇ ಬಿಜೆಪಿ ಅಭ್ಯರ್ಥಿಗಳು ಸೋಲುತ್ತಾರೆ. ಎಲ್ಲ ಸಮಯದಲ್ಲೂ ಜನರನ್ನು ಸುಳ್ಳಿನಿಂದ ಮಂಕುಬೂದಿ ಎರಚಿ ಗೆಲ್ಲಲು ಸಾಧ್ಯವಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಗೆದ್ದಿದ್ದ ಅಷ್ಟು ಮಂದಿ ಬಿಜೆಪಿ ಸಂಸದರು ಮೋದಿ ಹೆಸರಿನಲ್ಲಿ ಗೆದ್ದಿದ್ದರು. ರಾಘವೇಂದ್ರ ಮೂರು ಬಾರಿ ಗೆದ್ದರೂ, ಮೋದಿ ಹೆಸರಿನಲ್ಲೇ ಗೆದ್ದಿದ್ದು. ಆದರೆ, ಈ ಬಾರಿ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಸೋಲುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ.