ಹೆಸರು ಬೆಳೆ ರಕ್ಷಣೆಗೆ ಸ್ಪ್ರಿಂಕ್ಲರ್ ಮೊರೆ ಹೋದ ರೈತ
Jun 04 2024, 12:30 AM ISTಈ ವರ್ಷ ಮೇ ತಿಂಗಳಲ್ಲಿ ಅಲ್ಪ ಮಳೆಯಾಗಿದ್ದರಿಂದ ನರಗುಂದ ತಾಲೂಕಿನ ರೈತರು ಹೆಸರು ಬಿತ್ತನೆ ಮಾಡಿದ್ದು, ಈಗ ತೇವಾಂಶ ಕೊರತೆ ಉಂಟಾಗಿದೆ. ಹೀಗಾಗಿ ಸ್ಪ್ರಿಂಕ್ಲರ್ ಮೂಲಕ ಹೆಸರು ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ.