ಭದ್ರಾ ಡ್ಯಾಂ ನೀರು ನದಿಗೆ ಬಿಡಬೇಡಿ: ರೈತ ಒಕ್ಕೂಟ ತಾಕೀತು
Aug 06 2024, 12:37 AM ISTಭದ್ರಾ ಅಣೆಕಟ್ಟೆ ಭರ್ತಿಯಾಗಲು ಇನ್ನೂ 6 ಅಡಿ ಬಾಕಿ ಇದೆ. ಈ ಮಧ್ಯೆ ಘಟ್ಟ ಪ್ರದೇಶ, ಡ್ಯಾಂನ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನದಿಗೆ ನೀರು ಬಿಡುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ, ರೈತ ಮುಖಂಡ ಶಾಬನೂರು ಎಚ್.ಆರ್. ಲಿಂಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.