ರೈತ ಕುಲ ಒಂದೇ, ನಮ್ಮಲ್ಲಿ ಜಾತಿ ಸಂಘರ್ಷವಿಲ್ಲ
Dec 23 2024, 01:04 AM ISTರೈತರು ಈ ದೇಶದ ಮಾಲೀಕರು. ಈ ದೇಶಕ್ಕೆ ಅನ್ನ ಕೊಟ್ಟು ಎಲ್ಲರನ್ನೂ ಸಾಕಿ ಸಲಹಿದವರು. ರೈತ ಸಂಘ ಮೊದಲಿನಿಂದಲೂ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಬಂದಿದೆ. ರೈತರಿಗೆ ಒಂದೇ ಕುಲ. ರೈತ ಸಂಘದಲ್ಲಿ ಜಾತಿ ಸಂಘರ್ಷ ಇಲ್ಲ. ಆ ನಿಟ್ಟಿನಲ್ಲಿ ನಾವೆಲ್ಲರೂ ನಡೆದು ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.