ರೈತರು , ಕಾರ್ಮಿಕರ ಜೀವನದೊಂದಿಗೆ ಸರ್ಕಾರಗಳು ಚೆಲ್ಲಾಟವಾಡುತ್ತಿವೆ: ಅತ್ತಿಕುಳಿ ಸುಂದರೇಶ್
Oct 28 2024, 12:48 AM ISTಕೊಪ್ಪ, ಜನವಿರೋಧಿ ಅರಣ್ಯ ಕಾಯ್ದೆಗಳ ಪರಿಣಾಮ ಮಲೆನಾಡಿನ ಜನ ಸಂಕಷ್ಟದಲ್ಲಿ ಸಿಲುಕಿದ್ದು, ಇದನ್ನು ಪರಿಹರಿಸಬೇಕಿದ್ದ ಜನ ಪ್ರತಿನಿಧಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾನೂನು, ಸುಪ್ರಿಂಕೋರ್ಟ್ ನೆಪ ಮುಂದಿಟ್ಟು ರೈತ ಮತ್ತು ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಅದ್ಯಕ್ಷ ಅತ್ತಿಕುಳಿ ಸುಂದರೇಶ್ ಹೇಳಿದರು.