ಮಾತೋಶ್ರೀ ಕಾಲೋನಿಯ ಸೌಲಭ್ಯಗಳಿಗೆ ಸ್ಪಂದಿಸಿದ ಶಾಸಕ ಸೇಠ
Mar 13 2025, 12:50 AM ISTಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಹೂನಗರ ಪ್ರದೇಶದ ಸಂಗಮ ಗಲ್ಲಿ ಮಾತೋಶ್ರೀ ಕಾಲೋನಿಯಲ್ಲಿ ಕಳೆದ 25 ವರ್ಷಗಳಿಂದ ನಿವಾಸಿಗಳು ಮೂಲಭೂತ ಸೌಲಭ್ಯಗಳಿಗಾಗಿ ಹಂಬಲಿಸುತ್ತಿದ್ದರು. ರಸ್ತೆ, ಚರಂಡಿ ಮತ್ತು ನೀರಿನ ಸರಬರಾಜು ಸಮಸ್ಯೆಗಳು ಈ ಪ್ರದೇಶದ ನಾಗರಿಕರಿಗೆ ದೀರ್ಘಕಾಲದಿಂದ ತೊಂದರೆಯಾಗಿದ್ದವು. ಈ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ನಾಯಕ ಸಂದೇಶ್ ರಾಜಮಾನೆ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ ಅವರನ್ನು ಭೇಟಿಯಾಗಿ ತಮ್ಮ ತೊಂದರೆಗಳನ್ನು ಗಮನಕ್ಕೆ ತಂದಿದ್ದರು.