ಶಾಸಕ ಶಿವಗಂಗಾ ರಾಜಕೀಯದ ಇತಿಮಿತಿ ಅರಿಯಲಿ
Dec 24 2024, 12:50 AM ISTಮೂರು ದಶಕಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ನಾಲ್ಕು ಸಲ ಶಾಸಕರಾಗಿ, ಮೂರು ಸಲ ಸಚಿವರಾಗಿ ನಗರ, ಜಿಲ್ಲೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಬಗ್ಗೆ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ ನೀಡಿದ ಹೇಳಿಕೆ ಖಂಡನೀಯ. ಅವರು ತಮ್ಮ ಇತಿಮಿತಿ ಅರಿತು, ರಾಜಕಾರಣದಲ್ಲಿ ಮುಂದುವರಿಯಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಹೇಳಿದ್ದಾರೆ.