ಮುಂದಿನ 6 ತಿಂಗಳೊಳಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಮುಸ್ಲಿಂ ಓಲೈಕೆಗೆ ಟಿಪ್ಪು ಜಯಂತಿ ಮಾಡಿದ್ದು, ಮೈಸೂರಲ್ಲಿ ಜನರು ಸೋಲಿಸಿದರೂ ಬುದ್ಧಿ ಕಲಿಯುತ್ತಿಲ್ಲ. ಅರಸು ಭೂಮಿ ನೀಡಿದರೆ ಇವರು ಭೂಮಿ ಕಿತ್ತು ಕೊಳ್ಳುತ್ತಿದ್ದಾರೆ ಎಂದು ಪ್ರತಾಪ ಸಿಂಹ ಟೀಕಿಸಿದ್ದಾರೆ..
ಎರಡು ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ರೀತಿ ಮಾತನಾಡಿದ್ದಾರೆ. ಜೊತೆಗೆ ವಾಗ್ಮಿ, ದೊಡ್ಡ ಮೇಧಾವಿಗಳ ಥರ ಮಾತನಾಡಿದ್ದಾ ಎಂದು ಎಂಎಲ್ಸಿ ಸೂರಜ್ ರೇವಣ್ಣ ವಿರುದ್ಧ ಸಂಸದ ಶ್ರೇಯಸ್ ಪಟೇಲ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯಗೆ ಲಜ್ಜೆ, ಅಂಜಿಕೆ ಇಲ್ಲ. ನಾಳೆ ಬೆಳಗ್ಗೆ ಚುನಾವಣೆ ನಡೆದರೂ ನೀವು ನಿರ್ನಾಮ ಆಗುತ್ತೀರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವಿಗೆ ನ್ಯಾಯ ಕೊಡಿಸಲು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ ಪರಿಶೀಲಿಸಬೇಕೆಂದು ಸಂಸದ ಡಾ.ಕೆ. ಸುಧಾಕರ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.