ಹಾಲಿನ ಪ್ರೋತ್ಸಾಹಧನ ನೀಡಲು ಸರ್ಕಾರ ವಿಳಂಬ
Nov 17 2024, 01:20 AM ISTಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ರೈತರಿಗೆ ಪ್ರತಿ ತಿಂಗಳು ಪ್ರೋತ್ಸಾಹ ಧನ ನೀಡಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಸರ್ಕಾರವನ್ನು ಆಗ್ರಹಿಸಿದರು. ಎಲ್ಲಾ ರೀತಿಯ ಪದಾರ್ಥಗಳ ಬೆಲೆ ಹೆಚ್ಚಾಗಿದೆ, ಆದರೆ, ರೈತರಿಂದ ಕೊಳ್ಳುವ ಹಾಲಿನ ದರ ಕಡಿಮೆ ಇದೆ ರು. ೪೨ಕ್ಕೆ ಹೆಚ್ಚಿಸಿದರೆ ಉತ್ಪಾದಕರಿಗೆ ಅನುಕೂಲವಾಗಲಿದೆ. ಕೆಎಂಎಫ್ ಈ ಬಗ್ಗೆ ಗಮಹರಿಸಬೇಕು. ಹಿರೀಸಾವೆ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಎಟಿಎಂ ಕೇಂದ್ರ ತೆರೆಯಲಾಗುವುದು. ಸಹಕಾರ ಕ್ಷೇತ್ರದ ಮೂಲಕ ಸ್ತ್ರೀ ಶಕ್ತಿ ಸಂಘಗಳಿಗೆ ಹೆಚ್ಚಿನ ಸಾಲ ನೀಡಲಾಗಿದೆ ಎಂದರು.