ಕಲಾವಿದರ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕು
Nov 26 2024, 12:50 AM ISTಕಲಾವಿದರ ಪ್ರಾಯೋಜನ ಕಾರ್ಯಕ್ರಮಗಳಿಗೆ ಈ ವರ್ಷದ ಅನುದಾನವನ್ನು ಸರ್ಕಾರ ನೀಡಿರುವುದಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಚೆಲುವನಹಳ್ಳಿ ಶೇಖರಪ್ಪ ಮತ್ತು ಅಧ್ಯಕ್ಷ ರವಿಕುಮಾರ್ ಆಗ್ರಹಿಸಿದರು.ಕಲಾವಿದರಿಗೆ ಮಾಸಾಶನ ಕೊಡುವುದಾಗಿ ಸರಕಾರ ಹೇಳಿದ್ದು, ಆದೇಶ ಬಂದಿರುವುದಿಲ್ಲ. ಹೇಳಿಕೆ ನೀಡಿರುವುದಕ್ಕೆ ನಾವು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಧನ್ಯವಾದ ಎಂದರು.