ಚನ್ನಗಿರಿ ಅಭಿವೃದ್ಧಿ ಕಾಮಗಾರಿಗಳ ಜಾರಿಗೆ ಸರ್ಕಾರ ಮುಂದಾಗಲಿ: ವಿರೂಪಾಕ್ಷಪ್ಪ
Nov 19 2024, 12:48 AM ISTಶಾಸಕನಾಗಿದ್ದಾಗ 2022ನೇ ಇಸವಿಯಲ್ಲಿ ಗಂಗೇನಹಳ್ಳಿ- ಮಸಣಿಕೆರೆ ಕೆರೆ ಮತ್ತು ಮುಳ್ಳುಕೆರೆಗೆ ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ₹8.50 ಕೋಟಿ ಹಣ ಬಿಡುಗಡೆ ಮಾಡಿಸಿ, ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು. ಆದರೂ, ಇದುವರೆಗೂ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಾರಂಭಿಸಿಲ್ಲ. ಇದು ರೈತರ ಮೇಲೆ ಸರ್ಕಾರ ಎಷ್ಟರಮಟ್ಟಿಗೆ ಕಾಳಜಿ ಇಟ್ಟಿದೆ ಎನ್ನುವುದನ್ನು ತೋರುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚನ್ನಗಿರಿಯಲ್ಲಿ ಹೇಳಿದ್ದಾರೆ.