ಪಾಳುಬಿದ್ದ ಶತಮಾನ ಕಂಡ ಸರ್ಕಾರಿ ಶಾಲೆ ಕಂಡು ಡಾ.ತಿಪ್ಪೇಸ್ವಾಮಿ ಕಿಡಿ ಆಕ್ರೋಶ
Mar 20 2024, 01:20 AM ISTಪಾಳುಬಿದ್ದ ಕಟ್ಟಡಗಳು, ಬಣ್ಣಕಂಡು ದಶಕಗಳೇ ಕಳೆದಿರುವ ಗೋಡೆಗಳು, ಮುರಿದು ಹೋದ ಕಬ್ಬಿಣದ ಶೀಟ್ ಗಳು, ಎಲ್ಲಿ ನೋಡಿದರು ದೊಳೋ ದೂಳು. ಇದೆಲ್ಲವೂ ನಗರದ ಶಕ್ತಿಕೇಂದ್ರ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಕೂಗಳತೆ ದೂರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಕಂಡುಬಂದ ಚಿತ್ರಣ.