ಕಳೆಂಜ ಜನರಿಗೆ ಭೂಮಿ ಹಕ್ಕು ಕೊಡಿಸಲು ಸುಪ್ರೀಂ ಕೋರ್ಟ್‌ವರೆಗೂ ಹೋರಾಟಕ್ಕೆ ಸಿದ್ಧ: ಹರೀಶ್ ಪೂಂಜ
Mar 14 2024, 02:07 AM ISTಸರ್ವೇ ನಂಬರ್ 309ರಲ್ಲಿ ಕಳೆದ ನೂರಾರು ವರ್ಷಗಳಿಂದ ವಾಸವಾಗಿದ್ದಾರೆ ಎಂಬುದಕ್ಕೆ ಅಲ್ಲಿನ ಕೃಷಿ ಸಾಕ್ಷಿ. ಆದರೆ ಅರಣ್ಯ ಇಲಾಖೆ, ಕಂದಾಯ ಅಧಿಕಾರಿಗಳು, ಸರ್ವೆ ಇಲಾಖೆಯವರನ್ನು ಕರೆಸದೆ ಸರ್ವೆ ನಡೆಸಿದ್ದೇವೆ ಎಂದು ಹೇಳುವುದನ್ನು ನಂಬಲು ಸಾಧ್ಯವಿಲ್ಲ. ಮುಂದೆ ಸರ್ವೆ ಕಾರ್ಯಕ್ಕೆ ಬಂದಾಗ ನನ್ನನ್ನು ಕರೆಯಿರಿ ನಾನು ಬರುತ್ತೇನೆ, ನಮ್ಮ ಸಮಕ್ಷಮದಲ್ಲಿ ಸರ್ವೇ ನಡೆಯಲಿ ಎಂದ ಶಾಸಕ ಪೂಂಜ ಗ್ರಾಮಸ್ಥರಿಗೆ ಹೇಳಿದರು.