ಸುಪ್ರೀಂ ಕೋರ್ಟ್ಗೆ 75 ವರ್ಷದ ಸಂಭ್ರಮ
Jan 29 2025, 01:32 AM ISTನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯ ಸುಪ್ರೀಂ ಕೋರ್ಟ್ನ ಮೊದಲ ಕಲಾಪಕ್ಕೆ 75 ವರ್ಷ ತುಂಬಿದೆ. ಸಂವಿಧಾನ ಜಾರಿಗೆ ಬಂದ ಜನವರಿ 26, 1950ರಂದು ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿತು. ಜ. 28 1950ರಂದು ಉದ್ಘಾಟನೆಗೊಂಡಿತು. ಈ ಹಿಂದೆ ಸುಪ್ರೀಂ ಕೋರ್ಟ್ ಹಳೆಯ ಸಂಸತ್ ಭವನದಿಂದ ಕಾರ್ಯನಿರ್ವಹಿಸುತ್ತಿತ್ತು. 1958ರಲ್ಲಿ ತಿಲಕ್ ಮಾರ್ಗದಲ್ಲಿರುವ ಈಗಿನ ಕಟ್ಟಡದಲ್ಲಿ ಸ್ಥಳಾಂತರಗೊಂಡಿತು.