ಅಪಘಾತ ವಲಯ: ಕುಂಬ್ರ ಅಪಾಯಕಾರಿ ತಿರುವು ತೆರವು
Apr 30 2024, 02:15 AM ISTಕುಂಬ್ರ ಪೇಟೆಯ ಪಕ್ಕದಲ್ಲಿರುವ ಈ ರಸ್ತೆಯು ಹಿಂದೆ ಭಾರಿ ತಿರುವಿನಿಂದ ಹಾಗೂ ಇಳಿಜಾರಿನಿಂದ ಕೂಡಿತ್ತು. ರಸ್ತೆಯ ಒಂದು ಭಾಗದಲ್ಲಿ ಆಳವಾದ ತೋಡು ಇದ್ದರೆ, ಇನ್ನೊಂದು ಭಾಗದಲ್ಲಿ ಎತ್ತರವಾದ ಗುಡ್ಡವಿದೆ. ಅಲ್ಲದೆ ಇಲ್ಲಿ ಹಳೆಯ ಸೇತುವೆಯೂ ಇದ್ದು, ವಾಹನ ಪ್ರಯಾಣಿಕರು ಸ್ವಲ್ಪ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿಯಾಗಿತ್ತು.