ಟಂಟಂ-ಕಾರು ಅಪಘಾತ: ಮೂವರ ಸಾವು, 9 ಜನ ಗಾಯ
Jan 25 2024, 02:00 AM ISTಕಲಾದಗಿ: ಕಾರು ಮತ್ತು ಟಂಟಂ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, 9 ಜನರು ಗಾಯಗೊಂಡ ಘಟನೆ ಗದ್ದನಕೇರಿ ಗ್ರಾಮದ ರಾಮಾರೂಢ ಮಠದ ಬಳಿ ಬೆಳಗಾವಿ-ರಾಯಚೂರು ಹೆದ್ದಾರಿಯಲ್ಲಿ ಬುಧವಾರ ನಡೆದಿದೆ. ತುಳಸಿಗೇರಿಯ ಶಂಕ್ರಪ್ಪ ಮಾನಪ್ಪ ಮೆಳ್ಳಿಗೇರಿ (೭೦), ಕಲಾದಗಿಯ ಗೌರಿ ಭರತ ಚವ್ಹಾಣ (೨), ವಿಜಯ ಗಂಗಾರಾಮ ತೇಲಿ (೬೫) ಮೃತರು. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.