ಕಾಡ್ಗಿಚ್ಚಿಗೆ ೭೫ ಎಕರೆ ಅರಣ್ಯ ಪ್ರದೇಶವೇ ಭಸ್ಮ
Mar 25 2024, 12:46 AM ISTಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ತೋಗರಿಘಟ್ಟ ಸರ್ವೇ ನಂ.೯೭, ೯೮ ಮತ್ತು ೯೯ರಲ್ಲಿನ ೭೫ ಎಕರೆ ಅರಣ್ಯ ಪ್ರದೇಶವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅರಣ್ಯಕ್ಕೆ ಬೆಂಕಿ ಆವರಿಸಿದ ತಕ್ಷಣವೇ ಅರಣ್ಯಾಧಿಕಾರಿ ಮತ್ತು ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರೂ ತಕ್ಷಣ ಸ್ಥಳಕ್ಕೆ ಆಗಮಿಸದೇ ೮೦ ನಿಮಿಷ ತಡವಾಗಿ ಬಂದ ವೇಳೆಗೆ ಅರಣ್ಯದ ನಾಲ್ಕು ದಿಕ್ಕಿಗೂ ಬೆಂಕಿ ಆವರಿಸಿದೆ.