ಅರಣ್ಯ ನಿಗಮ ಅಧ್ಯಕ್ಷ ಬೇಳೂರುಗೆ ಶಿವಮೊಗ್ಗದಲ್ಲಿ ಭವ್ಯ ಸ್ವಾಗತ

Feb 04 2024, 01:34 AM IST
ಅರಣ್ಯ, ಕೈಗಾರಿಕೆ ನಿಗಮ ಅಧ್ಯಕ್ಷರಾದ ಬಳಿಕ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಬೆಂಗಳೂರಿನಿಂದ ಬಂದ ಬೇಳೂರು ಅವರನ್ನು ನಗರದ ಹೊರವಲಯದ ನಿದಿಗೆ ಕೆರೆ ಸಮೀಪ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೇಳೂರು ಅಭಿಮಾನಿಗಳು ಅವರನ್ನು ಬೃಹತ್ ರ್ಯಾಲಿ ಮೂಲಕ ಸ್ವಾಗತಿಸಿದರು. ನಗರಾದ್ಯಂತ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಸಮೀಪ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವ ಕಾಂಗ್ರೆಸ್‍ನಿಂದ ಬೃಹತ್ ಸೇಬಿನ ಹಾರ ಹಾಕಲಾಯಿತು.