ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಬಂದ್‌

Mar 02 2025, 01:17 AM IST
ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಹಲವು ತಿಂಗಳುಗಳಿಂದ ವೇತನ ಹಾಗೂ ಸೌಲಭ್ಯಗಳು ಸಿಗದಿರುವುದನ್ನು ಖಂಡಿಸಿ ಶನಿವಾರದಿಂದ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಿದ್ದಾರೆ. ಪ್ರಾಣದ ಹಂಗು ತೊರೆದು ಕಾಡಾನೆಗಳ ಹಿಂದೆ ಬಿದ್ದು ಅವುಗಳ ಚಲನವಲನ ಪತ್ತೆ ಮಾಡಿ ಅದರ ಮಾಹಿತಿಯನ್ನು ಆ ಭಾಗದ ಜನರಿಗೆ ನೀಡುತ್ತಿದ್ದರು. ಇದರಿಂದ ಸ್ಥಳೀಯರಿಗೆ ಆನೆಗಳ ಇರುವಿಕೆ ಬಗ್ಗೆ ಮಾಹಿತಿ ಸಿಗುತ್ತಿತ್ತು. ಇಂತಹ ಅತ್ಯಮೂಲ್ಯ ಮಾಹಿತಿ ನೀಡುತ್ತಿದ್ದ ಹೊರಗುತ್ತಿಗೆ ನೌಕರರಿಗೆ ನೀಡುತ್ತಿದ್ದುದು ಕೂಡ ಕನಿಷ್ಠ ವೇತನ ಮಾತ್ರ. ಇದೀಗ ಕೆಲ ತಿಂಗಳುಗಳಿಂದ ಅದು ಕೂಡ ಬಾರದ ಪರಿಣಾಮ ಈ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.