ಅರಣ್ಯ ಸಂರಕ್ಷಣೆಯು ಜೀವಿಗಳ ಉಳಿವಿನ ಅವಿಭಾಜ್ಯ ಅಂಗ
Sep 12 2025, 12:06 AM ISTಅರಣ್ಯ ರಕ್ಷಣೆಯ ಪಥದಲ್ಲಿ ಸಾವಿರಾರು ಅರಣ್ಯ ರಕ್ಷಕರು ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಅರಣ್ಯ ರಕ್ಷಕ ಶ್ರೀನಿವಾಸ್ ಅವರನ್ನು ಕಾಡುಗಳ್ಳ ವೀರಪ್ಪನ್ ಹತ್ಯೆ ಮಾಡಿದ ಘಟನೆ ಎಲ್ಲರಿಗೂ ಸ್ಮರಣೀಯ. ಆ ನಂತರದಿಂದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಎದುರಿಸುವ ಅಪಾಯಗಳು, ಸವಾಲುಗಳು ಎಲ್ಲರಿಗೂ ಅರ್ಥವಾಗಿವೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವನ್ಯಜೀವಿಗಳನ್ನು ರಕ್ಷಿಸುವ ಕಾರ್ಯದಲ್ಲಿ ಬಲಿಯಾದವರ ತ್ಯಾಗವನ್ನು ಮರೆಯದೆ ಅವರಿಗೆ ನಮನ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಹೇಳಿದರು. ಅರಣ್ಯ ರಕ್ಷಣೆಯ ಹಾದಿಯಲ್ಲಿ ವೀರ ಮರಣ ಹೊಂದಿದವರ ಕುಟುಂಬಗಳನ್ನೂ ಗೌರವಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಅವರನ್ನು ಆಹ್ವಾನಿಸಿ ಗೌರವ ಸಲ್ಲಿಸಬೇಕು ಹಾಗೂ ಸಮಾಜದ ಧರ್ಮ ಎಂದರು.