ಅರಣ್ಯ ಇಲಾಖೆ ಬೇಜವಾಬ್ದಾರಿತನಕ್ಕೆ ರೋಟರಿ ಅಸಮಾಧಾನ
Jun 27 2025, 12:48 AM ISTರೋಟರಿ ಕ್ಲಬ್ ಬಳಿ ಇರುವ ಸರ್ಕಾರಿ ಶಾಲೆಯ ಪಕ್ಕದ ಕಾಂಪೌಡ್ ಬಳಿ ಇದ್ದ ಹಳೆಯ ಮರದ ಕೊಂಬೆಗಳನ್ನು ಅರಣ್ಯ ಇಲಾಖೆ ಕತ್ತರಿಸಿ ಹಾಗೇ ಬಿಟ್ಟಿದ್ದು ಮಳೆಯಿಂದ ಕೊಳೆತು ನಾರುತ್ತಿದ್ದು ಸಾಂಕ್ರಾಮಿಕ ರೋಗ ಹಬ್ಬಲು ಕಾರಣವಾಗಿದೆ ಎಂದು ರೋಟರಿ ಸಂಸ್ಥೆಯವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ರಸ್ತೆಗಳಲ್ಲಿ ಸಾವು-ನೋವು ಸಂಭವಿಸುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.