ಹೈಕೋರ್ಟ್ ಆದೇಶ ಪ್ರತಿ ಸಿಗದಿದ್ದರೂ ಡೇರಿ ಫಲಿತಾಂಶ ಘೋಷಣೆ: ಆರೋಪ
Feb 13 2024, 12:50 AM ISTಮೇಲುಕೋಟೆ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆಲವರು ಅವರಿಗೆ ಬೇಕಾದ ಮತಪಟ್ಟಿ ಸಿದ್ಧಪಡಿಸಿಕೊಂಡು ಚುನಾವಣೆಗೆ ಮುಂದಾಗಿದ್ದರು. ಇದರ ವಿರುದ್ಧ ಹೈಕೋರ್ಟ್ ಮೊರೆಹೋಗಿ ಮತಪಟ್ಟಿಗೆ ತಡೆಯಾಜ್ಞೆ ತಂದು ಮತದಾನದ ಹಕ್ಕುಪಡೆದುಕೊಂಡು ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು-7 ಮತ್ತು ರೈತಸಂಘ-ಕಾಂಗ್ರೆಸ್ ಬೆಂಬಲಿತರು 5ರಲ್ಲಿ ಗೆಲುವು ಸಾಧಿಸಿದ್ದರು. ಇದರ ವಿರುದ್ಧ ಅವರು ಕೋರ್ಟ್ ಮೊರೆಹೋದ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಿದೆ ಕಾಯ್ದಿಸಿದ್ದರು.