ಆರ್ಥಿಕ ಸಂಕಷ್ಟವಿಲ್ಲ, ಅಗತ್ಯ ಪ್ರಾಧ್ಯಾಪಕರು ಸಿಬ್ಬಂದಿಯೂ ಇದ್ದಾರೆ, ಯಾವುದೇ ಸಮಸ್ಯೆ ಇಲ್ಲದಿದ್ದರೂ ‘ಮಹಾರಾಣಿ ವಿಶ್ವವಿದ್ಯಾಲಯ’ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ನಿತ್ಯ ನಡೆಯುವ ಅಬ್ಬರದ ಪ್ರತಿಭಟನೆ, ಹೋರಾಟ, ಚಳವಳಿಗಾರರ ಆಕ್ರೋಶದ ಕೂಗು, ಘೋಷಣೆ, ಭಾಷಣಗಳೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
ಮೈಸೂರು ವಿಶ್ವವಿದ್ಯಾಲಯದ ನಂತರ ರಾಜ್ಯದಲ್ಲಿ ಎರಡನೇ ಹಳೆಯ ವಿಶ್ವವಿದ್ಯಾಲಯ ಎಂಬ ಖ್ಯಾತಿಯ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪ್ರಸ್ತುತ ಹೇಳತೀರದ ಆರ್ಥಿಕ ಸಂಕಷ್ಟದಲ್ಲಿದ್ದು, ಬರುವ ಜೂನ್‌ನಿಂದ ವಿಶ್ವವಿದ್ಯಾಲಯದ 1800 ನಿವೃತ್ತ ನೌಕರರಿಗೆ ಪಿಂಚಣಿ ಸ್ಥಗಿತಗೊಂಡರೂ ಅಚ್ಚರಿ ಇಲ್ಲ!