ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ:ಸಚಿವ ಸಂತೋಸ ಲಾಡ್
Feb 08 2025, 12:32 AM ISTದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರೂಪಾಯಿ ಮೌಲ್ಯ ಡಾಲರ್ಗೆ ₹90ಕ್ಕೆ ಬಂದು ನಿಂತಿದೆ. ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ರೂಪಾಯಿ ಮೌಲ್ಯ ಹೆಚ್ಚಿಸಲು 600 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಇಲ್ಲದಿದ್ದರೆ ಡಾಲರ್ ಬೆಲೆ ₹90ರ ಗಡಿ ದಾಟುತ್ತಿತ್ತು ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರವನ್ನು ದೂರಿದರು.