ಆರ್ಥಿಕ ಸಾಕ್ಷರತೆ ವ್ಯಕ್ತಿಯ ಜೀವನದ ಪ್ರಮುಖ ಅಂಶ
Jul 21 2025, 12:00 AM ISTಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದ್ದು, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ ತಿಳಿಸಿದರು. ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಯಾವುದೇ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದೆ ಎಂದರು. ಬಜೆಟ್ ನಿರ್ವಹಣೆ, ಹೂಡಿಕೆ, ಸಾಲದ ಆಯ್ಕೆಗಳು, ವಿಮಾ ರಕ್ಷಣೆ, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳು ಸೇರಿದಂತೆ ವಿವಿಧ ಹಣಕಾಸು ವಿಷಯಗಳ ಕುರಿತು ಮಾಹಿತಿ ನೀಡಿದಲ್ಲದೇ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು.