‘ರಾಜ್ಯದ ಆರ್ಥಿಕ ಸ್ಥಿತಿ ಭಯ ಹುಟ್ಟಿಸುವಂತಿದೆ’
Apr 07 2025, 12:30 AM ISTಗ್ಯಾರಂಟಿ ಕೊಡಿರಪ್ಪಾ ಇಲ್ಲದಿದ್ದರೆ ಬೆಳಕಾಗೊಲ್ಲ ಎಂದು ಯಾರೂ ಕೂಡ ಇವರನ್ನು ಕೇಳಿರಲಿಲ್ಲ. ರೈತರಿಗೆ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಹೀಗೆ ಈ ಸರ್ಕಾರ ನಿತ್ಯವೂ ಎಲ್ಲವರ್ಗದ ತಲೆಯ ಮೇಲೆ ತೆರಿಗೆಯ ಭಾರ ಹಾಕುತ್ತಿದ್ದಾರೆ. ರೈತರಿಗೆ ಕೊಡುವ ಹಾಲಿನ ಬೆಲೆ ಇಳಿಸಿ, ಗ್ರಾಹಕರು ಕುಡಿಯುವ ಹಾಲಿಗೆ ಬೆಲೆ ಏರಿಸಿದ್ದಾರೆ. 18 ತಿಂಗಳಲ್ಲಿ 4 ಬಾರಿ ಹಾಲಿನ ಬೆಲೆ ಏರಿಕೆ ಮಾಡಿದ್ದರೂ ರೈತರಿಗೆ ಹಣ ವರ್ಗಾಯಿಸಿಲ್ಲ