ನಬಾರ್ಡ್ಗೆ ₹195 ಕೋಟಿ ಆರ್ಥಿಕ ನೆರವಿಗೆ ಪ್ರಸ್ತಾವನೆ: ಆರ್.ಎಂ. ಮಂಜುನಾಥಗೌಡ
Mar 12 2024, 02:10 AM ISTಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸರ್ಕಾರದ ಮೂಲಕ ನಬಾರ್ಡ್ಗೆ ₹195 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. 13 ಜಿಲ್ಲೆ, 74 ತಾಲೂಕುಗಳು, 65 ವಿಧಾನಸಭಾ ಕ್ಷೇತ್ರಗಳು, 21 ವಿಧಾನ ಪರಿಷತ್ತು ಸದಸ್ಯರು, 12 ಲೋಕಸಭಾ ಸದಸ್ಯರು, 13 ನಾಮ ನಿರ್ದೇಶಿತ ಸದಸ್ಯರನ್ನು ಮಲೆನಾಡು ಅಭಿವೃದ್ಧಿ ಮಂಡಳಿ ಒಳಗೊಂಡಿದೆ. ಮಂಡಳಿ ಮೂಲಕ ಕೆಲಸ ಮಾಡಲು ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಶಿವಮೊಗ್ಗದಲ್ಲಿ ಹೇಳಿದ್ದಾರೆ.