ಉಡುಪಿ: ಮರಾಠಿ ಭಾಷೆಯ ‘ಚಕ್ರವ್ಯೂಹ’ ಯಕ್ಷಗಾನ ಯಶಸ್ವಿ ಪ್ರದರ್ಶನ
May 25 2024, 12:47 AM ISTಉಡುಪಿಯಲ್ಲಿ ಪ್ರದರ್ಶನ ಕಂಡ ಮರಾಠಿ ಯಕ್ಷಗಾನದಲ್ಲಿ ವಿವಿಧ ಔದ್ಯೋಗಿಕ ಮತ್ತು ಶೈಕ್ಷಣಿಕ ಹಿನ್ನೆಲೆಯ ಸುಮಾರು 20 ಜನ ಹವ್ಯಾಸಿ ಕಲಾವಿದರು ಗುಣಮಟ್ಟದ ಪ್ರದರ್ಶನದ ಮೂಲಕ ಗಮನ ಸೆಳೆದರು. ಈ ಮೊದಲು ಮಹಾರಾಷ್ಟ್ರದಲ್ಲಿ ಈ ಪ್ರಸಂಗ ಮೂರು ಪ್ರದರ್ಶನಗಳನ್ನು ಕಂಡು, ಜನಮೆಚ್ಚಿಗೆ ಗಳಿಸಿತ್ತು. ಡಾ. ಶಿವರಾಮ ಕಾರಂತರ ಒಡನಾಡಿಯಾಗಿದ್ದ, ಮರಾಠಿ ಲೇಖಕ ವಿಜಯಕುಮಾರ್ ಪಾತೆರ್ಪೆರ್ ಅವರು ಪ್ರಸಂಗ ರಚನೆ ಮಾಡಿದ್ದಾರೆ.