ನೆಲದ ಮೇಲೆ ಕುಳಿತು ಊಟ ಮಾಡುವುದು ಒಳ್ಳೆಯದು
Apr 20 2025, 01:51 AM ISTಮಣ್ಣಿನ ಮಡಿಕೆಗಳನ್ನು ಬಳಸಿ, ಸೌದೆ ಒಲೆಯಲ್ಲಿ ಮಾಡಿದ ಅಡುಗೆ ಅತ್ಯಂತ ಬಲು ರುಚಿಕರವಾಗಿರುತ್ತದೆ. ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ನೆಲದ ಮೇಲೆ ಕುಳಿತು ಅನ್ನ ಪೂರ್ಣೇಶ್ವರಿಯನ್ನು ಸ್ಮರಿಸಿ ಊಟ ಮಾಡುತ್ತಿದ್ದರು. ನಮ್ಮ ಪೂರ್ವಜರು ನಡೆಸಿಕೊಂಡ ಬಂದ ರೀತಿ ಉತ್ತಮವಾದುದು. ನೆಲದ ಮೇಲೆ ಕುಳಿತು ಒಟ್ಟಿಗೆ ಊಟ ಮಾಡುವುದರಿಂದ ಅನೇಕ ಆರೋಗ್ಯಕರ ಅನುಕೂಲತೆಗಳು ಇವೆ ಎಂದರು. ಗ್ರಾಮೀಣ ಸೊಗಡಿನ ಅಕ್ಕಿ ಶಾವಿಗೆ ರಾಗಿ ಶಾವಿಗೆ ಚಿಲ್ಕ್ ಅವರೇ ಸಾರು ಮತ್ತು ಬೆಲ್ಲ ತೆಂಗಿನ ಕಾಯಿ ಹಾಲು ಇವುಗಳನ್ನು ನಮ್ಮ ರಂಗಲೋಕದ ಸದಸ್ಯರು, ಮಾತೆಯರು, ಮಕ್ಕಳು ಎಲ್ಲರೂ ಸೇರಿ ಬಹಳ ಶ್ರಮದಾಯಕವಾಗಿ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿ ನಮಗೆಲ್ಲರಿಗೂ ಉಣ ಬಡಿಸಲು ತಯಾರು ಮಾಡಿದ್ದಾರೆ, ಅವರೆಲ್ಲರಿಗೂ ಅಭಿನಂದನೆಗಳು ಎಂದರು.