ಕನ್ನಡ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್
Mar 19 2024, 12:47 AM ISTಕೇರಳದವರು ತಮ್ಮ ದುಡಿಮೆಯಲ್ಲಿ ಸ್ವಲ್ಪ ಪ್ರಮಾಣವನ್ನು ದಿನ ಪತ್ರಿಕೆ, ಪುಸ್ತಕಗಳ ಖರೀದಿಸಲು ಹಣ ಮೀಸಲು ಇಡುತ್ತಾರೆ. ಇದೇ ರೀತಿ ಕನ್ನಡಿಗರೂ ಮಾಡಿದರೆ ಕನ್ನಡದ ಪ್ರಕಾಶಕರು, ಲೇಖಕರು ಬೆಳೆಯುವ ಜೊತೆಗೆ ಕನ್ನಡವೂ ಬೆಳೆಯುತ್ತದೆ. ಮಹಾನಗರಗಳಲ್ಲಿ ಕನ್ನಡ ಮಾತನಾಡಿದರೆ ಕೀಳಾಗಿ ಕಾಣುವ ಸ್ಥಿತಿ ಇದೆ.