ಕನ್ನಡ ಬೆಳೆಸಲು ಸಾಹಿತ್ಯ ಸಮ್ಮೇಳನ ಸಹಕಾರಿ
Feb 14 2025, 12:30 AM ISTಇಂದಿನ ಕೈಗಾರಿಕರಣ, ಜಾಗತೀಕರಣದ ಪ್ರಭಾವ ಪಟ್ಟಣದಲ್ಲಿ ಹೆಚ್ಚಾಗಿದ್ದು ,ಈಗ ಹಳ್ಳಿಗಳಲ್ಲೂ ಪ್ರಭಾವ ಬೀರುತ್ತಿದೆ, ಅನ್ಯಭಾಷಿಕರು ಗ್ರಾಮಗಳಿಗೆ ವಲಸೆ ಬರುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಗ್ರಾಮಗಳಲ್ಲಿ ಉಳಿದಿರುವ ಕನ್ನಡದ ಕಂಪನ್ನು ಉಳಿಸಲು ಇಂತಹ ಸಮ್ಮೇಳನ ಸಹಕಾರಿಯಾಗುತ್ತದೆ. ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆ ಎನ್ನಲು ಬೇಸರವಾಗುತ್ತದೆ.