ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ನಡೆಸೋಣ
Oct 23 2024, 12:40 AM ISTಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನವೆಂಬರ್ ೧ರ ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಚೆನ್ನಾಂಬಿಕ ವೃತ್ತದಿಂದ ಅಲಂಕೃತ ವಾಹನದಲ್ಲಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಪಥಸಂಚಲನ, ಬ್ಯಾಂಡ್ಸೆಟ್ ಮೂಲಕ ಬಯಲು ಮಂದಿರದ ವೇದಿಕೆಗೆ ಕರೆ ತರುವುದು ಸೇರಿದಂತೆ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ನಡೆಸೋಣವೆಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಸಲಹೆ ನೀಡಿದರು. ರಾಜ್ಯೋತ್ಸವ ದಿನದಂದು ಸ್ವಚ್ಛತೆ, ಮೆರವಣಿಗೆ ವಾಹನ ಸಿದ್ಧಪಡಿಸುವ ಜವಾಬ್ದಾರಿಯನ್ನು ಪುರಸಭೆಗೆ, ಭದ್ರತೆ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಯಿತು.