ನ.4ಕ್ಕೆ ಗೆಳೆಯರ ಬಳಗದಿಂದ ಕನ್ನಡ ಹಬ್ಬ: ಕನಕಲ್
Oct 31 2024, 12:47 AM ISTಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ನ.4ರಂದು ಪಟ್ಟಣದ ಹೊಸನಗರದ ಟಿಪ್ಪು ಸುಲ್ತಾನ ವೃತ್ತದ ಬಳಿ ರಾಜ್ಯೋತ್ಸವದ ಅಂಗವಾಗಿ ಗೆಳೆಯರ ಬಳಗದಿಂದ ಕನ್ನಡ ಹಬ್ಬ ಏರ್ಪಡಿಸಲಾಗಿದೆ ಎಂದು ಗೆಳೆಯರ ಬಳಗದ ರೆಹಮಾನ್ ಕನಕಲ್ ಹೇಳಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.4 ರಂದು ಸಂಜೆ ನಡೆಯುವ ಕನ್ನಡ ಹಬ್ಬದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಾಲೂಕಿನ ಕನ್ನಡಪರ ಸಂಘಟನೆಗಳು, ಕನ್ನಡಿಗರು ಪಾಲ್ಗೊಳ್ಳಬೇಕು.