ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದಲ್ಲಿ ಕಳ್ಳತನ
Jun 05 2025, 12:47 AM ISTತಾಲೂಕಿನ ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದ ಕೊಠಡಿ ಕಿಟಕಿ ರಾಡ್ ಮುರಿದು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕೃಷಿ ಪರಿಕರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಮಂಗಳವಾರ ನಡೆದಿದೆ. ರೈತರಿಗೆ ವಿತರಿಸಬೇಕಾಗಿರುವ ಬಿತ್ತನೆ ಬೀಜಗಳಾದ ಭತ್ತ, ಮುಸುಕಿನ ಜೋಳ, ದ್ವಿದಳ ಧಾನ್ಯ, ಹಾರೆ, ಗುದ್ದಲಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳರು ಕಳವು ಮಾಡಿಲ್ಲ ಆದರೆ ಅವುಗಳ ಮೇಲೆ ಔಷಧಗಳನ್ನು ಎರಚಿ ಹಾನಿಗೊಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.