• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮನೆ ಮುಂದೆ ನಿಲ್ಲಿಸಿದ್ದ ಕಲ್ಲಿನಾಥ ಶ್ರೀಗಳ ಬೈಕ್‌ ಕಳ್ಳತನ

Jan 27 2025, 12:45 AM IST
ವಿಜಯಪುರ: ಮನೆಮುಂದೆ ನಿಲ್ಲಿಸಿದ್ದ ಸ್ವಾಮೀಜಿಯೊಬ್ಬರ ಬೈಕ್‌ನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಕೊಲ್ಹಾರದಲ್ಲಿ ನಡೆದಿದೆ. ಕೊಲ್ಹಾರದಲ್ಲಿರುವ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿಗೆ ಸೇರಿದ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಮಾಡಲಾಗಿದೆ. ಜನೇವರಿ 24ರಂದು ತಡರಾತ್ರಿ ರಾಯಲ್ ಎನ್‌ಪೀಲ್ಡ್ ಬೈಕ್ ಅನ್ನು ಕಳ್ಳರು ಕದ್ದೋಯ್ದಿದ್ದಾರೆ. ರಾತ್ರಿ ವೇಳೆ ನಿಲ್ಲಿಸಿದ್ದ ಬೈಕ್ ಗೆ ಹ್ಯಾಂಡಲ್ ಲಾಕ್ ಹಾಕದೆ ಇರುವುದನ್ನು ಗಮನಿಸಿ ಕಳ್ಳತನ ಮಾಡಲಾಗಿದೆ.

ಮನೆಯಲ್ಲಿದ್ದ ₹ 8.71 ಲಕ್ಷ ಚಿನ್ನಾಭರಣ, ನಗದು ಕಳ್ಳತನ

Jan 13 2025, 12:48 AM IST
ಕನ್ನಡಪ್ರಭ ವಾರ್ತೆ ಚಡಚಣಮನೆಯವರು ಮಲಗಿದ್ದಾಗ ಮನೆಗೆ ನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಸುಮಾರು ₹ 7.80 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ₹ 1.54 ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಿರನಾಳ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಗ್ರಾಮದ ಲವಾ ಶಿವಶರಣ ಎಂಬುವರ ಮನೆಯೇ ಕಳ್ಳತನವಾಗಿದೆ. ಇವರು ಇಂಡಿ ಕೆಎಸ್ಆರ್‌ಟಿಸಿ ಡಿಪೋದಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಎಂದಿನಂತೆ ಮನೆಯವರೆಲ್ಲರೂ ಊಟ ಮಾಡಿ ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದರು.

ಕಳ್ಳತನ: 9 ಲಕ್ಷಕ್ಕೂ ಅಧಿಕ ಬೆಲೆಯ ವಸ್ತು ಜಪ್ತಿ

Jan 12 2025, 01:15 AM IST
ವಿವಿಧ ಗ್ರಾಮಗಳಲ್ಲಿ ಮನೆಗಳ್ಳತನ ಹಾಗೂ ಗದ್ದನಕೇರಿ ಕ್ರಾಸ್‌ನಲ್ಲಿ ನಡೆದ ಬಂಗಾರ ಸರಗಳ್ಳತನದ ಪ್ರಕರಣವನ್ನು ಭೇದಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸುವಲ್ಲಿ ಕಲಾದಗಿ ಪೊಲೀಸ್ ಪಡೆ ಯಶಸ್ವಿಯಾಗಿದೆ.

ಮನೆ ಕಳ್ಳತನ ಮಾಡಿದ್ದ ಕಳ್ಳನ ಬಂಧನ: ಬೈಕ್‌, ಚಿನ್ನಾಭರಣ ವಶ

Jan 10 2025, 12:46 AM IST
ಸಿಂದಗಿ: ಸಿಂದಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳ ಕಳ್ಳತನ ನಡೆಸಿದ್ದ ಕಳ್ಳನನ್ನು ಬಂಧಿಸುವಲ್ಲಿ ಸಿಂದಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ರಾಜನಕೂಳೂರು ಗ್ರಾಮದ ನಿಂಗಪ್ಪ ರಾಜಪ್ಪ ಬಡಿಗೇರ ಬಂಧಿತ ಕಳ್ಳನಾಗಿದ್ದು, ಈತ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣ ಸೇರಿದಂತೆ ತಾಲೂಕಿನ ಕೊಕಟನೂರು, ಸುಂಗಠಾಣ ಗ್ರಾಮಗಳಲ್ಲಿ ಮನೆಗಳ ಕಳ್ಳತನ ನಡೆಸಿದ್ದನು. ಅಲ್ಲದೇ, ವಿಚಾರಣೆ ವೇಳೆ ಕಳ್ಳತನ ಮಾಡಿದ್ದಾಗಿ ಆತನೇ ಒಪ್ಪಿಕೊಂಡಿದ್ದಾನೆ.

ದೇವಸ್ಥಾನಗಳಲ್ಲಿ ಕಳ್ಳತನ: ಆರೋಪಿ ಬಂಧನ, ಆಭರಣಗಳು ವಶ

Jan 10 2025, 12:45 AM IST
ಕೆ.ಆರ್.ಪೇಟೆ ತಾಲೂಕಿನ ಸಂತೇಚಾಚಳ್ಳಿ ಹೋಬಳಿಯ ಆಘಲಯ ಗ್ರಾಮದ ಪ್ರದೀಪ್ (35) ಬಂಧಿತ ಆರೋಪಿ. ಕಳ್ಳತನವಾಗಿದ್ದ ದೇವರ ಆಭರಣಗಳು ಹಾಗೂ ಪೂಜಾ ಸಾಮಗ್ರಿಗಳಾದ 3 ಹಿತ್ತಾಳೆ, 3 ಮಂಟಪಗಳು, 18 ಬಿರಡೆಗಳು, 3 ಛತ್ರಿಗಳು, ಒಂದು ರಥದ ಕಳಸವನ್ನು ವಶಕ್ಕೆ ಪಡೆಯಲಾಗಿದೆ.

349 ಕಳ್ಳತನ ಪ್ರಕರಣದಲ್ಲಿ ₹1.91 ಕೋಟಿ ಮೌಲ್ಯದ ವಸ್ತುಗಳು ವಶ: ಎಸ್ಪಿ ಡಾ. ಶೋಭಾರಾಣಿ

Jan 08 2025, 12:16 AM IST
ವಿವಿಧ ಕಳ್ಳತನ ಪ್ರಕರಣಗಳಲ್ಲಿ 106ಪ್ರಕರಣ ಪತ್ತೆ ಹಚ್ಚಿ, ಈ ಅವಧಿಯಲ್ಲಿ ಕಳ್ಳತನವಾಗಿದ್ದ ₹4.94 ಕೋಟಿ ಮೌಲ್ಯದ ವಸ್ತುಗಳ ಪೈಕಿ ₹1.91 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಕಳ್ಳತನ ನಡೆಸಿದ್ದ ೧೪ ಕಳ್ಳರ ಬಂಧನ

Jan 06 2025, 01:02 AM IST
ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ವಿವಿಧ ಬಡಾವಣೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಒಟ್ಟು ೧೪ ಆರೋಪಿಗಳನ್ನು ಬಂಧಿಸಿ ಅವರಿಂದ ₹೬೭.೭೯ ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಶಿರಸಿಯಲ್ಲಿ ಕಳ್ಳತನ ಆರೋಪಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ, 7 ಜನರ ಬಂಧನ

Jan 04 2025, 12:33 AM IST
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮುಬಾರಕ್ ಅಬ್ದುಲ್ ಭಾಷಾ ಶೇಖ್ ಹಾಗೂ ಇನ್ನುಳಿದ ೬ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ದೂರು ನೀಡಿದ್ದಾರೆ.

ಕಾಫಿಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದು ಕೊಡಗಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಳ

Jan 04 2025, 12:32 AM IST

ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ, ಆದರೆ ಹೀಗೆ ಎಲ್ಲೆಂದರಲ್ಲಿ ಕಾಫಿ ಹಾಕಿದರೆ ಕಳ್ಳರು ಬಹಳ ಸುಲಭವಾಗಿ ಕಾಫಿ ಕದಿಯುತ್ತಾರೆ. 

ಕಳ್ಳತನ ಪ್ರಕರಣಗಳು ಹೆಚ್ಚಳ: ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ಮನವಿ ಸಲ್ಲಿಕೆ

Jan 03 2025, 12:31 AM IST
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಸೇರಿದಂತೆ ವಿವಿಧೆಡೆ ಕಳ್ಳತನವಾಗಿದೆ. ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ, ಕ್ಯಾತನಹಳ್ಳಿಯಲ್ಲಿ ನಡೆದ ಮನೆ ಕಳ್ಳತನ ಮಾಡಲು ಬಂದು ಮನೆ ಮಾಲೀಕರನ್ನೇ ಹತ್ಯೆ ಮಾಡಿ ಹೋಗಿರುವ ಘಟನೆಗಳು ನಡೆದಿವೆ. ಇದರಿಂದ ಮಹಿಳೆಯರು, ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 19
  • next >

More Trending News

Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved