ಕಾಂಗ್ರೆಸ್ ಕಾರ್ಯಕರ್ತರು ಪುಢಾರಿಗಳೆಂಬ ಹೇಳಿಕೆ ಸಲ್ಲದು
Dec 05 2023, 01:30 AM ISTಕೆಎಚ್ಬಿ ಬಡಾವಣೆಯಲ್ಲಿ ಅಪೂರ್ಣವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತರಾತುರಿಯಲ್ಲಿ ಉದ್ಘಾಟಿಸಿದರು. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಅಸ್ಥಿತ್ವದ ನಂತರವೂ ಸಂಪೂರ್ಣಗೊಂಡ ಆಸ್ಪತ್ರೆಯನ್ನು ಪುನಃ ಹೋಮ ಹವನದ ಮೂಲಕ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಉಸ್ತುವಾರಿ ಸಚಿವರ ಗಮನಕ್ಕೆ ತಾರದೇ ಚಾಲನೆ ನೀಡಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಸತತ 4 ದಶಕ ಶಾಸಕ, ಡಿಸಿಎಂ, ಸಿಎಂ ಆಗಿ ಎಲ್ಲ ಅಧಿಕಾರ ಅನುಭವಿಸಿದ ಯಡಿಯೂರಪ್ಪ ಅವರು ತಾಲೂಕಿನ ನಿವೇಶನರಹಿತ ಬಡವರಿಗೆ ಉಚಿತ ನಿವೇಶನ ವಿತರಿಸಲಿಲ್ಲ. ಸಾಗುವಳಿದಾರರಿಗೆ ಹಕ್ಕುಪತ್ರ ದೊರಕಿಸಿಲ್ಲ. ಒತ್ತುವರಿದಾರ ಬಗರ್ಹುಕುಂ ರೈತರಿಗೆ ₹5 ಸಾವಿರ ದಂಡ, ಒಂದು ವರ್ಷ ಜೈಲು ಶಿಕ್ಷೆಯ ಕಠಿಣ ಕಾನೂನು ಜಾರಿಗೊಳಿಸಿದ ಕೀರ್ತಿ ಹೊಂದಿದ್ದಾರೆ ಎಂದು ವ್ಯಂಗ್ಯವಾಡಿದರು.