ಸಾರ್ವಜನಿಕ ರಸ್ತೆಗೆ ಸ್ವಂತ ಖರ್ಚಿನಲ್ಲಿ ಕಾಂಕ್ರಿಟ್ ಹೊದಿಸಿದ ಕಾರ್ಮಿಕ!
Mar 01 2024, 02:17 AM ISTರಾಮನಗರ ಹೆಗ್ಗಳ ಶಾಲೆಯ ರಸ್ತೆಯ ಸಮೀಪದಲ್ಲಿ ಮೇಲಿನ ಭಾಗದಲ್ಲಿ ಬರೆಯೊಂದು ಇದ್ದು ಮಳೆಗಾಲದಲ್ಲಿ ಆ ಬರೆಯ ಮೂಲಕ ನೀರು ಕೊಚ್ಚಿ ಬಂದು ರಸ್ತೆ ಹೊಂಡವಾಗಿ ಕೆಸರು ತುಂಬಿರುತ್ತದೆ. ಇದರಿಂದ ಸಾರ್ವಜನಿಕರಿಗೂ ಕಷ್ಟವಾಗುತ್ತಿತ್ತು. ಇದನ್ನು ಮನಗಂಡ ಕೂಲಿ ಕಾರ್ಮಿಕ ಮಧು ಸ್ವಂತ ಖರ್ಚಿನಲ್ಲಿ ರಸ್ತೆಗೆ ಕಾಂಕ್ರಿಟ್ ಹಾಕಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.