ಶೃಂಗೇರಿ: ಮಳೆ ತಗ್ಗಿದರೂ ನಿಲ್ಲದ ಗಾಳಿ ಆರ್ಭಟ,
Jul 28 2024, 02:06 AM ISTಶೃಂಗೇರಿ, ತಾಲೂಕಿನಾದ್ಯಂತ ಶುಕ್ರವಾರ ಅಬ್ಬರಿಸಿದ ಪುಷ್ಯ ಮಳೆಯಿಂದಾಗಿ ರಾತ್ರಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿತ್ತು. ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಕುರಾದಮನೆ ಬಳಿ ತುಂಗಾ ನದಿ ಪ್ರವಾಹ ರಸ್ತೆಯ ಮೇಲೆ ಹರಿದು ಸಂಪರ್ಕ ಕಡಿತಗೊಂಡಿತ್ತು. ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗು ಸೇತುವೆ ಅರ್ಧ ಮುಳುಗಡೆಯಾದರೆ, ಮಾಣಿ ಬೈಲು ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆ ಕಡಿತಗೊಂಡು ಬೆಳಿಗ್ಗೆ ಪ್ರವಾಹ ಇಳಿಮುಖವಾಗಿ ಸಂಚಾರ ಪುನರ್ ಆರಂಭಗೊಂಡಿತು.