ಇಂಡಿಯಾನ ಆಸ್ಪತ್ರೆಯಲ್ಲಿ ‘ವಾಲ್ವ್ ಇನ್ ವಾಲ್ವ್’ ಟಿಎವಿಆರ್ ಯಶಸ್ವಿ ಚಿಕಿತ್ಸೆ
Jul 30 2025, 12:53 AM ISTತೀವ್ರವಾದ ಆಯೊರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಆದರೆ 10-15 ವರ್ಷಗಳಲ್ಲಿ ಆ ವಾಲ್ವ್‌ಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೂತನ ತಂತ್ರಜ್ಞಾನ ವಾಲ್ವ್ ಇನ್ ವಾಲ್ವ್ ಟಿಎವಿಆರ್ ಬಹುಮಟ್ಟಿಗೆ ಸುರಕ್ಷಿತವಾದ ಆಯ್ಕೆ.