ಕಳ್ಳೇರಿ ಗ್ರಾಮ ಪಂಚಾಯತ್ ಚುನಾವಣೆ
May 16 2025, 02:01 AM ISTಕಾನೂನು ಪಾಲನೆ ಮಾಡಬೇಕಾಗಿದ್ದ ಅಧಿಕಾರಿಗಳೇ ಕಾನೂನು ಗಾಳಿಗೆ ತೂರಿ ತಮಗೆ ತೋಚಿದಂತೆ ಚುನಾವಣೆ ನಡೆಸಿ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ದರ್ಪ ತೋರಿದ್ದಾರೆಂದು ಕಳ್ಳೇರಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಹಾಗೂ ಸದಸ್ಯೆ ಮೀನಾಕ್ಷಿ ಗಿರೀಶ್ ಆರೋಪ ಮಾಡಿದರು. ಇವರ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನಮ್ಮ ಗ್ರಾಪಂ ನಲ್ಲಿ ಚುನಾವಣೆ ನಡೆದಿದ್ದರೂ ಸಹ ಸಮಯಕ್ಕಿಂತ ಮುಂಚಿತವಾಗಿ ನಿಗದಿ ಪಡಿಸಿದ ಸಮಯಕ್ಕಿಂತ ಅವರಿಗೆ ಬೇಕಾದ ರೀತಿಯಲ್ಲಿ ಚುನಾವಣೆ ನಡೆಸಿದ್ದು ಈ ಬಗ್ಗೆ ಸಂಬಂಧಪಟ್ಟ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಹಾಗು ಜಿಲ್ಲಾಧಿಕಾರಿಗಳಿಗೆ ಎಸಿಯವರಿಗೆ ಪತ್ರ ಬರೆಯಲಾಗಿದೆ ಎಂದರು.