ಎತ್ತಿನ ಬಂಡಿ, ವಿವಿಧ ಜಾನಪದ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ
Apr 05 2025, 12:49 AM ISTಕಾಲೇಜಿನಿಂದ ಹೊರಟ ಮೆರವಣಿಗೆಯು ವಿವೇಕಾನಂದ ನಗರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ, ಕಾಲೇಜಿಗೆ ವಾಪಸ್ ಆಯಿತು. ನಂತರ ಬುಗುರಿ, ಗೋಲಿ, ಕುಂಟೆ ಬಿಲ್ಲೆ, ಚೌಕಾಬಾರ, ಅಳುಗುಳಿ ಮಣೆ ಮೊದಲಾದ ದೇಸಿ ಕ್ರೀಡೆಗಳು, ಗಾದೆ ಸವಾಲ್, ಜನಪದ ಗೀತಗಾಯನ ನಡೆದವು, ಪಲ್ಲವಿ ಅವರ ನೇತೃತ್ವದಲ್ಲಿ ಜನಪದ ವಸ್ತು ಪ್ರದರ್ಶನ ನಡೆಯಿತು. ದೇಸಿ ಆಹಾರ ಮೇಳವೂ ಇತ್ತು.