ಬಿಜೆಪಿ-ಜೆಡಿಎಸ್ ಲೋಕಸಭೆ ಸ್ಥಾನ ಹೊಂದಾಣಿಕೆ ಜಗ್ಗಾಟ
Feb 23 2024, 01:46 AM ISTಭದ್ರಕೋಟೆಯಾಗಿರುವ ಮಂಡ್ಯ ಸಿಗದಿದ್ದರೆ ಮೈಸೂರು ಮೇಲೆ ದಳಪತಿಗಳ ಕಣ್ಣು ಬಿದ್ದಿದ್ದು, ಹಾಲಿ ಸಂಸದರು ಇರುವ ಮೈಸೂರು ಕ್ಷೇತ್ರ ಬಿಡುವ ಮನಸ್ಸು ಬಿಜೆಪಿಗೆ ಇಲ್ಲವಾಗಿದೆ. ಉಭಯ ಪಕ್ಷಗಳ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಬಿಜೆಪಿಯದ್ದೇ ಮೇಲುಗೈ ಆಗಿದ್ದು, ಹೊಂದಾಣಿಕೆ ಆಗುವ ಮುನ್ನವೇ ಮೈತ್ರಿ ಘೋಷಿಸಿದ್ದ ಜೆಡಿಎಸ್ ಈಗ ಅಡಕತ್ತರಿಯಲ್ಲಿ ಸಿಲುಕಿದೆ. ಮೈತ್ರಿಯಿಂದ ಹೊರಬರಲು ಆಗದ ಕಾರಣ ಸೀಮಿತ ಸೀಟಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ.