24 ತಾಸಲ್ಲಿ ಭಾರತ ಮೇಲಿನ ಸುಂಕ ಇನ್ನಷ್ಟು ಏರಿಕೆ: ಟ್ರಂಪ್
Aug 05 2025, 11:45 PM ISTದಿನಕ್ಕೊಂದು ಹೇಳಿಕೆ ಮೂಲಕ ತುಘಲಕ್ ನೀತಿ ಪಾಲಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮತ್ತದೇ ಕೆಲಸ ಮಾಡಿದ್ದಾರೆ. ರಷ್ಯಾದಿಂದ ತೈಲ ಆಮದು ನಿಲ್ಲಿಸದಿದ್ದರೆ, ಭಾರತದ ಮೇಲೆ ಈಗಾಗಲೇ ಘೋಷಿಸಿರುವ ಶೇ.25ರಷ್ಟು ಸುಂಕವನ್ನು ಮತ್ತಷ್ಟು ಏರಿಸುವುದಾಗಿ ಬೆದರಿಕೆ ಒಡ್ಡಿದ್ದ ಟ್ರಂಪ್, 24 ಗಂಟೆಯ ಒಳಗೆ ಆ ನಿರ್ಧಾರವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.