ಮೋದಿ ಮತ್ತಿತರ ವಿದೇಶಿ ಗಣ್ಯರು ನನ್ನನ್ನು ಭೇಟಿಯಾಗಲು ಬಂದಾಗ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಕಚೇರಿಗಳ ಮುಂದಿನ ಟೆಂಟ್, ಭಿತ್ತಿಪತ್ರ, ರಸ್ತೆ ಗುಂಡಿಗಳನ್ನು ನೋಡುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ವಾಷಿಂಗ್ಟನ್ ಡಿಸಿಯ ಸ್ವಚ್ಛತೆಗೆ ಸೂಚಿಸಿದ್ದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವಿದೇಶಿ ವಸ್ತುಗಳ ಮೇಲೆ ಭಾರಿ ತೆರಿಗೆ ಘೋಷಣೆ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಸ್ಟೀಲ್ ಮತ್ತು ಅಲ್ಯುಮಿನಿಯಂ ಮೇಲಿನ ಆಮದು ತೆರಿಗೆಯನ್ನು ಶೇ.25ರಷ್ಟು ಹೆಚ್ಚಿಸುವ ಮೂಲಕ ಅಧಿಕೃತವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರಿಗೆ ಯುದ್ಧದ ಕಿಡಿಹಚ್ಚಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದೀಗ ಭಾರತವು ತೆರಿಗೆ ಕಡಿತಕ್ಕೆ ಒಪ್ಪಿಕೊಂಡಿದೆ’ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇದು ಅತ್ಯಂತ ಕೆಟ್ಟ ಹೇಳಿಕೆ. ಇದೇ ರೀತಿ ಜೆಲೆನ್‌ಸ್ಕಿ ನಿಲುವು ಮುಂದುವರಿಸಿದರೆ ಅಮೆರಿಕವು ಉಕ್ರೇನ್‌ಗೆ ಬೆಂಬಲ ಸ್ಥಗಿತ ಮಾಡಬೇಕಾದೀತು’ ಎಂದು ಎಚ್ಚರಿಸಿದ್ದಾರೆ.
ಜೆಲೆನ್ಸ್ಕಿಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶುಕ್ರವಾರ ಶ್ವೇತಭವನದಲ್ಲಿ ರಷ್ಯಾ-ಉಕ್ರೇನ್ ಸಮರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ವಿಫಲವಾಗಿದೆ.