• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬೆಲೆ ಕುಸಿತ: ತರಕಾರಿ ರಸ್ತೆಗೆ ಸುರಿದು ಧರಣಿ

Apr 08 2025, 12:32 AM IST
ಈರುಳ್ಳಿ ಮತ್ತು ಟೊಮೆಟೋ ಬೆಲೆ ದಿಢೀರ್ ಕುಸಿತ ಕಂಡಿದ್ದು, ಆಕ್ರೋಶಗೊಂಡ ಬೆಳೆಗಾರರು ಈರುಳ್ಳಿ ಮತ್ತು ಟೊಮೆಟೋವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಹೂವಿನಹಡಗಲಿಯಲ್ಲಿ ನಡೆದಿದೆ. ಮತ್ತೊಂದೆಡೆ ಎಲೆಕೋಸು (ಕ್ಯಾಬೇಜ್‌) ದರವೂ ಕುಸಿದಿದ್ದು, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ತರಕಾರಿ ಬೆಲೆ ನಿಗದಿ ಮಾಡಿ ರೈತರನ್ನು ಉಳಿಸಿ

Mar 19 2025, 12:36 AM IST
ತರಕಾರಿಗಳ ಬೆಲೆ ಕುಸಿತದಿಂದ ರೈತರು ಕಂಗಲಾಗಿದ್ದು, ಕೇರಳ ಸರ್ಕಾರದ ಮಾದರಿಯಲ್ಲಿ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ತರಕಾರಿ ಬುಟ್ಟಿಗಳನ್ನು ತಲೆ ಮೇಲೆ ಹೊತ್ತುತಂದು ಜಿಲ್ಲಾಧಿಕಾರಿಗಳಿಗೆ ತರಕಾರಿ ಬುಟ್ಟಿ ನೀಡುವ ಮೂಲಕ ವಿನೂತನವಾದ ಪ್ರತಿಭಟನೆ ಮಾಡಿ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ತರಕಾರಿ ಬೇಡ ಎಂದರೂ ರೈತರು ಬಲವಂತವಾಗಿ ಕೊಡಲು ಮುಂದಾದರು.

ಸ್ವಿಗ್ಗಿ, ಜೊಮೆಟೋ ಮಾದರಿ ಹಾಪ್‌ಕಾಮ್ಸ್‌ನಿಂದ ಮನೆಗೆ ಡೆಲಿವರಿ - ವಾಟ್ಸಪ್‌ಲ್ಲಿ ಬುಕ್‌ ಮಾಡಿದರೆ ಮನೆಗೆ ತರಕಾರಿ!

Feb 27 2025, 10:16 AM IST

ನಗರದ ಅಪಾರ್ಟ್‌ಮೆಂಟ್‌ ವಾಸಿಗಳಿಗೆ ತಾಜಾ ಹಣ್ಣು, ತರಕಾರಿಗಳನ್ನು ಮನೆಬಾಗಿಲಿಗೆ ತಲುಪಿಸುವ ಗ್ರಾಹಕ ಸ್ನೇಹಿ ‘ವಾಟ್ಸಪ್‌ ಸೇಲ್ಸ್‌ ಚಾನಲ್‌’ ಪ್ರಾರಂಭಿಸಲು ಹಾಪ್‌ಕಾಮ್ಸ್‌ ಸಿದ್ಧತೆ ನಡೆಸಿದೆ.

ಕಾರವಾರ: ಗುಳ್ಳಾಪುರದ ಲಾರಿ ಪಲ್ಟಿ ದುರಂತದಲ್ಲಿ ಬದುಕುಳಿದ ತರಕಾರಿ ಮಾರಾಟಗಾರರ ಆಕ್ರಂದನ

Jan 23 2025, 12:49 AM IST
ಶಿರೂರು ಗುಡ್ಡ ಕುಸಿತ ದುರಂತ ಮಾಸುವ ಮುನ್ನ ಜಿಲ್ಲೆ ಮತ್ತೊಂದು ದೊಡ್ಡ ದುರಂತವನ್ನು ನೋಡುವಂತಾಯಿತು.

ತರಕಾರಿ ವರ್ತಕರ ಸಂಘದಿಂದ ಶಿವಕುಮಾರ ಸ್ವಾಮಿಗಳ 6ನೇ ಪುಣ್ಯಸ್ಮರಣೆ

Jan 22 2025, 12:33 AM IST
ನಡೆದಾಡುವ ದೇವರು ಶಿವಕುಮಾರಸ್ವಾಮೀಜಿಗಳ ೬ನೇ ಪುಣ್ಯಸ್ಮರಣೆಯ ಆಚರಣೆಯು ನಮ್ಮ ಸೌಭಾಗ್ಯವೆಂದು ವರ್ತಕ ದೇವರಾಜ್ ತಿಳಿಸಿದರು. ಪ್ರತಿದಿನ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಜತೆಗೆ ಮಠಕ್ಕೆ ಭೇಟಿ ನೀಡುವ ಸಾವಿರಾರು ಜನರಿಗೆ ನಿರಂತರ ಅನ್ನದಾಸೋಹ ನೀಡಲು ಸಾಮಾನ್ಯರಿಂದ ಸಾಧ್ಯವೇ ಇಲ್ಲ. ಇಂತಹ ಪೂಜ್ಯನೀಯ ಕಾರ್ಯವನ್ನು ಮಾಡಿದ ಮಹಾನ್ ಕಾಯಕಯೋಗಿ ಶಿವಕುಮಾರಸ್ವಾಮೀಜಿಗಳ ಸ್ಮರಣೆ ಜತೆಗೆ ಅನ್ನಸಂತರ್ಪಣೆ ಕಾರ್ಯದ ಮೂಲಕ ಗೌರವ ನಮನ ಸಲ್ಲಿಸುತ್ತೇವೆ ಎಂದರು.

ರೈತರ ಮಕ್ಕಳಿಗೇ ಹಣ್ಣು, ತರಕಾರಿ ಹೆಸರು ಗೊತ್ತಿಲ್ಲ

Jan 12 2025, 11:45 PM IST
ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ರೈತರು ಬೆಳೆಯುವ ಹೂ, ಹಣ್ಣು, ತರಕಾರಿ ಹೆಸರು ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಸಂತೆಗಳ ಪರಿಕಲ್ಪನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ರೈತಸ್ನೇಹಿ ಆಗಿದ್ದು, ವಿಶೇಷವಾಗಿ ಮಕ್ಕಳಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳ ಹೆಸರು, ತಿಳಿದುಕೊಳ್ಳಲು ಒಳ್ಳೆಯ ವೇದಿಕೆ

ಬ್ಲಿಂಕಿಟ್‌ನಿಂದ ತರಕಾರಿ, ದಿನಸಿ ರೀತಿ 10 ನಿಮಿಷಕ್ಕೆ ಆ್ಯಂಬುಲೆನ್ಸ್‌ ಸೇವೆ ಶುರು

Jan 03 2025, 12:34 AM IST

 ಪ್ರತಿಷ್ಠಿತ ಆನ್‌ಲೈನ್ ಫುಡ್‌ ಡೆಲಿವರಿ ಸಂಸ್ಥೆ ಬ್ಲಿಂಕಿಟ್‌ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಲು ಮುಂದಾಗಿದೆ. ಗುರುಗ್ರಾಮ್‌ನ ಆಯ್ದ ಪ್ರದೇಶಗಳಲ್ಲಿ 10 ನಿಮಿಷದಲ್ಲಿ ಆ್ಯಂಬುಲೆನ್ಸ್‌ ಸೇವೆ ನೀಡುವ ಯೋಜನೆ ಆರಂಭಿಸಿದೆ.

ಗೋಕರ್ಣದಲ್ಲಿ ತರಕಾರಿ ಖರೀದಿ ಕೇಂದ್ರ ಉದ್ಘಾಟನೆ

Dec 27 2024, 12:48 AM IST
ಗೋಕರ್ಣ ತರಕಾರಿ ಬೆಳೆಗಾರ ರೈತ ಉತ್ಪಾದಕರ ಸಂಘದಿಂದ ತರಕಾರಿ ಖರೀದಿ ಕೇಂದ್ರವನ್ನು ಇಲ್ಲಿನ ಬಿಜ್ಜೂರಿನಲ್ಲಿ ಬುಧವಾರ ಸಂಜೆ ಉದ್ಘಾಟಿಸಲಾಯಿತು. ಈಗಾಗಲೇ ಕಡಮೆ, ಹೊಸ್ಕೇರಿ ಭಾಗದಲ್ಲಿ ಖರೀದಿ ಕೇಂದ್ರ ತೆರೆದಿದ್ದು, ಭಾವಿಕೊಡ್ಲದಲ್ಲೂ ತೆರೆಯಲಿದ್ದೇವೆ ಎಂದು ಸಂಘದ ಸದಸ್ಯ ಕುಮಾರ ಮಾರ್ಕಾಂಡೆ ಹೇಳಿದರು.

ಅಸಾದ್‌ ಮಿಲಿಟರಿ ಟ್ಯಾಂಕರ್‌ ಈಗ ತರಕಾರಿ ಗಾಡಿ?

Dec 18 2024, 12:45 AM IST
ಸಿರಿಯಾದ ಪದಚ್ಯುತ ಸರ್ವಾಧಿಕಾರಿ ಬಷರ್‌ ಅಲ್‌ ಅಸಾದ್‌ ಬಳಸುತ್ತಿದ್ದ ಟ್ಯಾಂಕರ್‌ಗಳು ಈಗ ತರಕಾರಿ ಮಾರುವ ಗಾಡಿಗಳಾಗಿ ಮಾರ್ಪಾಟಾಗಿರುವ ಫೋಟೋ ವೈರಲ್‌ ಆಗಿವೆ. ಆದರೆ ಇವುಗಳ ನೈಜತೆ ತಿಳಿದುಬಂದಿಲ್ಲ

ಸಾವಯವ ತರಕಾರಿ ಆರೋಗ್ಯಕ್ಕೆ ಸಹಕಾರಿ

Dec 16 2024, 12:45 AM IST
ಸಾವಯವ ಗೊಬ್ಬರ ಬಳಸಿ ಮನೆ ಅಂಗಳದಲ್ಲಿಯೇ ಕೈತೋಟ ನಿರ್ಮಾಣ ಮಾಡಿ ಟೊಮ್ಯಾಟೋ, ಬದನೆ ಸೇರಿದಂತೆ ಇತರೆ ತರಕಾರಿ ಬೆಳೆದು ಬಳಕೆ ಮಾಡಿದರೆ ನಿತ್ಯ ನೀವು ಸೇವನೆ ಆಹಾರ ಪೌಷ್ಟಿಕತೆಯಿಂದ ಕೂಡಿರಲಿದ್ದು ಮನುಷ್ಯನ ಆರೋಗ್ಯ ಸದಾ ಸ್ಥಿರವಾಗಿರಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು.
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ಅಪ್ಪಟ ಗ್ರಾಮೀಣ ಸೊಗಡಿನ ರಾಜಕಾರಣಿ ಮೇಟಿ ಇನ್ನಿಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved