ದಕ್ಷಿಣ ಭಾರತದ ಮೊದಲ ಗೋಶಾಲೆಗೆ 81 ವರ್ಷ
Jan 29 2025, 01:32 AM IST1944ರಲ್ಲಿ ಗೋವುಗಳ ಸಂರಕ್ಷಣೆಗಾಗಿಯೇ ಇಲ್ಲಿ ತಲೆ ಎತ್ತಿದ ಗೋಶಾಲೆಯಲ್ಲಿ ಈಗ ಬರೋಬ್ಬರಿ 1300 ಗೋವುಗಳು ಇವೆ. ಗೋವುಗಳಿಗೆ ಈಗಿನಷ್ಟು ಪೂಜನೀಯ ಭಾವನೆ ಇರಲಿಲ್ಲ. ಗೋವುಗಳು ಕಾಲು ಮುರಿದುಕೊಂಡರೆ, ರೋಗಕ್ಕೆ ತುತ್ತಾದರೆ ಕಟುಕರಿಗೆ ನೀಡಿ, ಕೈ ತೊಳೆದುಕೊಳ್ಳಲಾಗುತ್ತಿತ್ತು. ಆದರೆ, ಯಾವುದೇ ಗೋವು ಕಟುಕನ ಪಾಲಾಗಬಾರದು ಎನ್ನುವ ಧ್ಯೇಯದೊಂದಿಗೆ ಇದು ಪ್ರಾರಂಭವಾಗಿದೆ.