ದಕ್ಷಿಣ ಭಾರತ ಜೈನಸಭಾದ ಅಧ್ಯಕ್ಷ ರಾವಸಾಹೇಬ ಇನ್ನಿಲ್ಲ
Jun 26 2024, 12:37 AM ISTಕನ್ನಡಪ್ರಭ ವಾರ್ತೆ ಬೆಳಗಾವಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಭಾರತ ಜೈನಸಭಾದ ಅಧ್ಯಕ್ಷ, ಖ್ಯಾತ ಉದ್ಯಮಿ, ಸಹಕಾರಿ ಧುರೀಣ ರಾವಸಾಹೇಬ ಪಾಟೀಲ (83) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ ಮೀನಾಕ್ಷಿ, ಪುತ್ರ ಅಭಿನಂದನ್, ಯುವ ಮುಖಂಡ ಉತ್ತಮ ಪಾಟೀಲ ಮತ್ತು ಪುತ್ರಿ ದೀಪಾಲಿ, ಸಹೋದರ, ಅಳಿಯ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ.