ತಾರೆಯರ ದುಬಾರಿ ಸಂಭಾವನೆ ಮತ್ತು ಅನುಪಸ್ಥಿತಿಯಿಂದಾಗಿ ತಮಿಳು ಚಿತ್ರೋದ್ಯಮವು ಚಿತ್ರ ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.
ದೇಶದಲ್ಲಿ ಈ ಬಾರಿಯ ಮಳೆಗಾಲದ ಅವಧಿ ಅರ್ಧದಷ್ಟು ಕಳೆದಿದ್ದು, ದಕ್ಷಿಣ ಭಾರತದಲ್ಲಿ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ ಆಗಿದೆ ಆಗಸ್ಟ್, ಸೆಪ್ಟೆಂಬರಲ್ಲೂ ಹೆಚ್ಚು ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ನೆಲ್ಸನ್ ಮಂಡೇಲಾ ಅವರಿಗೆ ಸಂಬಂಧಿಸಿದ ದಕ್ಷಿಣ ಆಫ್ರಿಕಾದ ಐತಿಹಾಸಿಕ ತಾಣಗಳನ್ನು ಶನಿವಾರ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು.
. ನಾನು ಜಿಲ್ಲಾ ಪರಿಷತ್ ಮೆಂಬರ್ ಆಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಎಲ್ಲ ಬೆಂಗಳೂರು ಜಿಲ್ಲೆಗೆ ಸೇರಿದ್ದು, ಈ ಕಡೆ ನಂದಿಬೆಟ್ಟದವರೆಗೆ, ಹೊಸಕೋಟೆ ಮಾಗಡಿವರೆಗೆ ನಾವೆಲ್ಲ ಬೆಂಗಳೂರು ಜಿಲ್ಲೆಗೆ ಸೇರಿದವರು. ನಮ್ಮನ್ನು ಗುರುತಿಸುವುದೇ ನಮ್ಮ ಊರಿನಿಂದ ಅದನ್ನು ಕಳೆದುಕೊಳ್ಳಲು ಆಗುವುದೇ ?